ಚಿರನೂತನ ಸಂಸ್ಥೆಯ ಕಾರ್ಯ ಚಟುವಟಿಕೆಯ ವಿವರಗಳು

ಚಿರನೂತನ ಸಂಸ್ಥೆವತಿಯಿಂದ ಕಲ್ಲಾಪುರ  ಗ್ರಾಮದಲ್ಲಿ,ಗ್ರಾಮ ನೈರ್ಮಲ್ಯ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು  ಹಮ್ಮಿಕೊಳ್ಳಲಾಗಿತ್ತು.
  ಶ್ರೀಯುತ ಬಸವರಾಜಪ್ಪನವರು ಮಕ್ಕಳಿಗೆ 10,000 ಮೌಲ್ಯದ ಶಿಕ್ಷಣ ಪರಿಕರಗಳನ್ನು ವಿತರಿಸಿದರು.

ಚಿರನೂತನ ಸಂಸ್ಥೆಯ ವತಿಯಿಂದ ಕೊಪ್ಪ ತಾಲೂಕಿನ ಬಾಳಗಡಿ ಕೊಪ್ಪ ಗ್ರಾಮದಲ್ಲಿ ಮಾನಸಿಕ ಆರೋಗ್ಯದ ಕುರಿತು ಅರಿವು ಕಾರ್ಯಕ್ರಮ ಹಾಗೂ ಮಹಿಳಾ ಸಾಂತ್ವನ ಸಹಾಯವಾಣಿ ಯೋಜನೆಯ‌ ಕುರಿತು ಅರಿವು ಕಾರ್ಯಕ್ರಮವನ್ನು ಸಂಸ್ಥೆಯ ಸದಸ್ಯರಾದ ರಾಣಿ & ಬಿಂದು ರವರು ನೆರವೇರಿಸಿಕೊಟ್ಟರು.
ಮಕ್ಕಳ ರಾತ್ರಿ ಶಾಲೆಯಲ್ಲಿ ಕಲಿಕೆಗೆ ಪೂರಕವಾದ ಪಠ್ಯೇತರ ಚಟುವಟಿಕೆಗಳನ್ನು ಹೇಳಿಕೊಡುತ್ತಿರುವುದು.

ಚಿರನೂತನ ಮಕ್ಕಳ ರಾತ್ರಿ ಶಾಲೆಯವತಿಯಿಂದ ಮಕ್ಕಳ ದಿನಾಚಾರಣೆಯನ್ನು ಆಚರಿಸಲಾಗಿತುˌ ಇದರೊಂದಿಗೆ ಜವಹರ್ಲಾಲ್ ನೆಹರು ರವರ ಆದರ್ಶಗಳನ್ನು & ಮಕ್ಕಳ ಬಗೆಗೆ ಅವರಿಗಿರುವ ಪ್ರೀತಿ & ಆದರ್ಶಗಳನ್ನು ಪರಿಚಯಿಸಿಕೊಡಲಾಗಿತು.


 ಕ್ರಿಯಾಶೀಲ ಗುಂಪು ಚಟುವಟಿಕೆ & ಮನೋಸಾಮಾಜಿಕ ಅರಿವು ಕಾರ್ಯಕ್ರಮವನ್ನು ಉತ್ತಮೇಶ್ವರ ಶಾಲೆ. ಕೊಪ್ಪದಲ್ಲಿ ಆಯೋಜಿಸಲಾಗಿತ್ತು. ಸಂಸ್ಥೆಯ ಖಜಾಂಚಿಯಾದ ರಾಜಶೇಖರ್  & ಸದಸ್ಯರಾದ ರಾಣಿಯವರು ಭಾಗಿಯಾಗಿದ್ದರು.
ಚಿರನೂತನ ಸಂಸ್ಥೆಯವತಿಯಿಂದ ದರ್ಶನ್ ಐ ಕೇರ್ ನ ಸಹಯೋಗದೊಂದಿಗೆ ಕಣಬಗಟ್ಟೆ ಗ್ರಾಮದಲ್ಲಿ ದಿನಾಂಕ-03-12-2018 ರಂದು ಉಚಿತ ನೇತ್ರ ತಪಾಸಣಾ & ಶಸ್ರ್ತಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿತ್ತುˌ ಸರಿಸುಮಾರು 70 ಕ್ಕೂ ಅಧಿಕ ಜನರು ನೇತ್ರತಪಾಸಣೆಯನ್ನು ಮಾಡಿಸಿದರು & 30 ಕ್ಕೂ ಅಧಿಕ   ಜನರು ಶಸ್ರ್ತ ತಪಾಸಣೆಗೆ ಒಳಪಟ್ಟರು.


Comments

Popular posts from this blog